ಸಣ್ಣ SUV ವಿಭಾಗದಲ್ಲಿ ಸದೃಢ ಕಾರು ಪರಿಚಯಿಸಿದ SKODA: ಸಂಸ್ಕೃತದ Kylaq ಹೆಸರು

ಸ್ಪಟಿಕ, ಸ್ಪೂರ್ತಿ ಎಂಬ ಕೈಲಾಶ ಪರ್ವತದಿಂದ ಪ್ರೇರಣೆ ಪಡೆದು ಸೃಷ್ಟಿಯಾದ ಪದ ‘ಕಿಲಾಕ್‌’. ಈ ಹೆಸರನ್ನು ಜರ್ಮನಿಯ ಸ್ಕೊಡಾ ತನ್ನ 4 ಮೀಟರ್ ಒಳಗಿನ ಪುಟ್ಟ ಎಸ್‌ಯುವಿಗೆ ಹೆಸರಿಟ್ಟಿದೆ.

ಸ್ಕೊಡಾದ ಆಧುನಿಕ ವಿನ್ಯಾಸದಿಂದ ಹೊಸ ಭಾಷ್ಯ ಬರೆಯಲು ಬಂದಿರುವ ಕಂಪನಿ, ಪುಟ್ಟದಾದ, ಗಟ್ಟಿಮುಟ್ಟಾದ ಕಾರನ್ನು ಪರಿಚಯಿಸುವ ಮೂಲಕ ಈ ವಿಭಾಗದಲ್ಲಿರುವ ಟಾಟಾ ನೆಕ್ಸಾನ್‌, ಹ್ಯುಂಡೇ ವೆನ್ಯು, ಮಹೀಂದ್ರಾ 3ಎಕ್ಸ್‌ಒ, ಮಾರುತಿ ಬ್ರೀಜಾದಂತ ಕಾರುಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ನೋಡಲು ಕುಷಾಕ್‌ ಸೋದರನಂತೆಯೇ ಕಾಣುವ ಕಿಲಾಕ್‌ನ ಮುಂಭಾಗದ ಗ್ರಿಲ್‌, ಎಲ್‌ಇಡಿ ಡಿಆರ್‌ಎಲ್‌, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಮಾತ್ರವಲ್ಲ, ನಾಲ್ಕು ಕಣ್ಣುಗಳುಳ್ಳ ಹೆಡ್‌ಲೈಟ್‌ ಕಿಲಾಕ್‌ನ ವಿಶೇಷತೆಗಳು.

17 ಇಂಚುಗಳ ಗಾಲಿಗಳು, ಹಿಂಬದಿಯಲ್ಲಿ ಟಿ ಆಕಾರದ ಎಲ್‌ಇಡಿ ದೀಪಗಳು ಹಾಗೂ ಪ್ರಿಸಂ ವಿನ್ಯಾಸ ನೋಡುಗರನ್ನು ಮೊದಲ ನೋಟದಲ್ಲೇ ಸೆಳೆಯುತ್ತದೆ

ಒಳಾಂಗಣದಲ್ಲಿ ನೀಡಿರುವ ಸೌಕರ್ಯ ಹಾಗೂ ಆರಾಮದಾಯಕ ಆಕರ್ಷಿಸುವಂತಿದೆ. 446 ಲೀಟರ್‌ನ ಬೃಹತ್ ಬೂಟ್‌ ಸ್ಪೇಸ್‌ ನೀಡಲಾಗಿದೆ. ಹಿಂಬದಿಯ ಸೀಟುಗಳನ್ನು ಮಡಚಿದರೆ 1,256 ಲೀಟರ್‌ನಷ್ಟು ಬೂಟ್‌ ಸ್ಪೇಸ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ಈ ವಿಭಾಗದಲ್ಲೇ ಅತಿ ಹೆಚ್ಚು ಎಂದೆನ್ನಲಾಗಿದೆ.

ಒಳಭಾಗದಲ್ಲಿ ಸ್ಟೋವಬಲ್‌ ಪಾರ್ಸಲ್‌ ಟ್ರೇ್‌, ಎಲೆಕ್ಟ್ರಾನಿಕ್‌ ಗುಂಡಿಗಳ ಮೂಲಕ ಹೊಂದಿಸಬಹುದಾದ ಸೀಟುಗಳು, ವೆಂಟಿಲೇಟೆಡ್ ಸೀಟುಗಳು ಕಾರಿನ ವಿಲಾಸಿತನವನ್ನು ಹೆಚ್ಚಿಸಿದೆ. ಹಿಂಬದಿಯ ಆಸನ ಹೆಚ್ಚು ಆರಾಮದಾಯಕವಾಗಿದೆ. ಹೀಗಾಗಿ ಇದು ಪರ್ಫಾರ್ಮೆನ್ಸ್‌ ಕಾರು ಎನ್ನುವುದರ ಜತೆಗೆ, ಫ್ಯಾಮಿಲಿ ಕಾರು ಎಂದೂ ಕರೆಯಬಹುದು.

ಪ್ರಯಾಣದ ಹಿತವನ್ನು ಇನ್ನಷ್ಟು ಹೆಚ್ಚಿಸಲು ಬೃಹತ್ ಪರದೆಯ ಇನ್ಫೊಟೈನ್ಮೆಂಟ್‌ ಸಿಸ್ಟಂ ನೀಡಲಾಗಿದೆ. 10 ಇಂಚುಗಳ ಈ ಇನ್ಫೊಟೈನ್ಮೆಂಟ್‌ ಸಿಸ್ಟಂನಲ್ಲಿ ವೈರ್‌ಲೆಸ್‌ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್‌ ಆಟೊ ಸೌಲಭ್ಯ ಇದೆ. ಎತ್ತರ ಹಾಗೂ ದೂರವನ್ನು ಹೊಂದಿಸಿಕೊಳ್ಳಬಹುದಾದ ಎಲೆಕ್ಟ್ರಿಕಲ್‌ ಅಡ್ಜೆಸ್ಟಬಲ್ ಸೀಟ್ ಹಾಗೂ ಹವಾನಿಯಂತ್ರಿತ ಸಾಧನ ಅಳವಡಿಸಿರುವ ವೆಂಟಿಲೇಟೆಡ್ ಸೀಟ್‌ಗಳನ್ನೂ ನೀಡಲಾಗಿದೆ.

ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ನೀಡಲಾಗಿದೆ. ಇದು ಕಿಲಾಕ್‌ನ ಟಾಪ್ ವೇರಿಯೆಂಟ್‌ ಝಡ್‌ಎಕ್ಸ್‌ಐ ಪ್ಲಸ್‌ ಟ್ರಿಮ್‌ನಲ್ಲಿ ಮಾತ್ರ ಲಭ್ಯ. ಇದಕ್ಕಿಂತ ಕೆಳಗಿನ ವೇರಿಯಂಟ್‌ಗಳಲ್ಲಿ ಕೇವಲ 2 ಏರ್‌ಬ್ಯಾಗ್‌ಗಳು ಮಾತ್ರ ಇವೆ. ಉಳಿದಂತೆ ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್‌ ಹಾಗೂ ಚೈಲ್ಡ್‌ ಸೀಟ್‌ ಅ್ಯಂಕರೇಜಸ್‌ಗಳು ಇವೆ.

ಕಾರ್ನರಿಂಗ್ ಲೈಟ್‌ ಸೌಲಭ್ಯವನ್ನೂ ನೀಡಲಾಗಿದೆ. ಇದರಿಂದ ಕಾರು ತಿರುವು ತೆಗೆದುಕೊಳ್ಳುವಾಗ ಹೆಚ್ಚಿನ ಬೆಳಕಿನ ಸೌಕರ್ಯ ಸಿಗಲಿದೆ. ಉಳಿದಂತೆ ಎಲ್‌ಇಡಿ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ ಹಾಗೂ ಮುಂಭಾಗದಲ್ಲಿ ಎಲ್‌ಇಡಿ ಫಾಗ್ ಲ್ಯಾಂಪ್‌ ಇದೆ.

ಟೈರ್‌ ಪ್ರಷರ್‌ ಮಾನಿಟರಿಂಗ್ ಸಿಸ್ಟಂ (TPMS) ಸೌಲಭ್ಯವೂ ಕಿಲಾಕ್‌ನಲ್ಲಿದೆ. ಕಿಲಾಕ್‌ನ ಅರಂಭಿಕ ಮೊತ್ತ ₹7.89 ಲಕ್ಷ (ಎಕ್ಸ್ ಶೊರೂಂ) ಬೆಲೆಯನ್ನು ಕಂಪನಿ ನಿಗದಿಪಡಿಸಿದೆ. ಕಿಲಾಕ್‌ನ ಎಲ್ಲಾ ಮಾದರಿಗಳ ಬೆಲೆಯನ್ನು ಡಿ. 2ರಂದು ಕಂಪನಿ ಘೋಷಿಸಲಿದೆ. ಕಾರುಗಳ ಡೆಲಿವರಿ ಜ. 27ರಿಂದ ಆರಂಭವಾಗಲಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ