ಜೂನ್‌ 1ರಿಂದ ಜಾರಿಗೆ ಬಂದಿವೆ ಹೊಸ ರಸ್ತೆ ಸಾರಿಗೆ ನಿಯಮ; ಇಲ್ಲಿದೆ ಪೂರ್ಣ ವಿವರ

ವಾಹನ ಪರವಾನಗಿ ಪಡೆಯಲು ಪರೀಕ್ಷಾ ಟ್ರ್ಯಾಕ್

ವಾಹನ ನೋಂದಣಿ, ಚಾಲನಾ ಪರವಾನಗಿ, ಚಾಲನಾ ನಿಯಮ ಉಲ್ಲಂಘನೆಗೆ ದಂಡ ಹೀಗೆ ಸಾರಿಗೆ ಇಲಾಖೆಯ ಹಲವು ನಿಯಮಗಳಲ್ಲಿ ಸರ್ಕಾರವು ಸಾಕಷ್ಟು ಬದಲಾವಣೆ ತಂದಿದೆ. ಇದು ಜೂನ್ 1ರಿಂದ ಜಾರಿಗೆ ಬಂದಿದೆ. ಬಂದಿರುವ ಹೊಸ ಕಾನೂನು ಅರಿತಲ್ಲಿ ದಂಡದ ಹೊರೆ ತಪ್ಪಲಿದೆ.

ಭಾರತದಲ್ಲಿ ಚಾಲನ ಪರವಾನಗಿ ಪಡೆಯುವುದು ಎಂದರೆ ಸುದೀರ್ಘ ಅವಧಿಯ ಕೆಲಸ, ಅರ್ಥವಾಗದ ಅರ್ಜಿಗಳು, ಏಜೆಂಟರ ಹಾವಳಿ, ಲಂಚ, ಅನಗತ್ಯ ಕಿರಿಕಿರಿ. ಆದರೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜೂನ್ 1ರಿಂದ ಹೊಸ ಕಾನೂನು ಜಾರಿಗೆ ತಂದಿದೆ.

  1. ಚಾಲನಾ ಪರವಾನಗಿ ಪರೀಕ್ಷೆ ಆರ್‌ಟಿಒದಲ್ಲಿ ನಡೆಯದು

ಈ ಬಾರಿಯ ದೊಡ್ಡ ಮಟ್ಟದ ಬದಲಾವಣೆ ಎಂದರೆ, ಇನ್ನು ಮುಂದೆ ಚಾಲನಾ ಪರವಾನಗಿ ಪರೀಕ್ಷೆಯು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ನಡೆಯದು. ಅದರ ಬದಲು, ಪ್ರಮಾಣೀಕೃತ ಖಾಸಗಿ ಚಾಲನಾ ಶಾಲೆಗಳು ಇನ್ನು ಮುಂದೆ ಈ ಕೆಲಸವನ್ನು ಮಾಡಲಿವೆ. ಇದು ಪರವಾನಗಿ ಪಡೆಯುವವರ ಕೆಲಸ ಇನ್ನಷ್ಟು ಸುಲಭಗೊಳಿಸಲಿದೆ.

2. ಖಾಸಗಿ ಚಾಲನಾ ಕಲಿಕಾ ಶಾಲೆಗಳಿಗೆ ಅಧಿಕಾರ

ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಚಾಲನಾ ಕಲಿಕಾ ಶಾಲೆಗಳು ಇನ್ನು ಮುಂದೆ ಚಾಲನಾ ಪರವಾನಗಿ ನೀಡಲು ಅನುಮತಿ ಪಡೆದಿರುತ್ತವೆ. ಈ ಶಾಲೆಗಳು ಕೆಲವೊಂದು ಮಾನದಂಡಗಳನ್ನು ಪೂರ್ಣಗೊಳಿಸಬೇಕು.

  • ದ್ವಿಚಕ್ರ ವಾಹನಕ್ಕಾಗಿ 1 ಎಕರೆ ಜಾಗ; ಲಘು ಮೋಟಾರು ವಾಹನಗಳಿಗೆ 2 ಎಕರೆ ಜಾಗ ಇರಬೇಕು.
  • ಚಾಲನಾ ಪರೀಕ್ಷೆಗೆ ಸೂಕ್ತ ಸೌಕರ್ಯಗಳಿರಬೇಕು
  • ತರಬೇತಿ ನೀಡುವವರು ನಿರ್ದಿಷ್ಟ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 5 ವರ್ಷ ಅನುಭವ, ಐಟಿ ತಂತ್ರಜ್ಞಾನದಲ್ಲಿ ಜ್ಞಾನವಿರಬೇಕು

3. ಮರು ತರಬೇತಿ ಅಗತ್ಯ

ಚಾಲನಾ ಪರವಾನಗಿ ಕಲಿಕೆಗೆ ಕನಿಷ್ಠ ಅವಧಿ ಅಗತ್ಯ. ಇದಕ್ಕಾಗಿ…

  • ಲಘು ಮೋಟಾರು ವಾಹನಗಳಿಗೆ (ಕಾರು, ಸ್ಕೂಟರ್ ಇತರೆ) 29 ಗಂಟೆಗಳು (4 ವಾರ) ಅಗತ್ಯ
  • ಭಾರೀ ವಾಹನಗಳಿಗೆ (ಟ್ರಕ್‌, ಬಸ್‌ ಇತ್ಯಾದಿ) 38 ಗಂಟೆಗಳ ತರಬೇತಿ ಅಗತ್ಯ
  • ಈ ತರಬೇತಿಯು ತರಗತಿ ಮತ್ತು ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿದೆ.
  • ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ

ರಸ್ತೆ ಸಂಚಾರ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.

  • ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ₹2 ಸಾವಿರ ದಂಡ
  • 18 ವರ್ಷಕ್ಕಿಂತ ಒಳಗಿನವರು ವಾಹನ ಚಾಲನೆ ಮಾಡಿದರೆ ₹25 ಸಾವಿರ ದಂಡ; ಕಾನೂನು ಕ್ರಮ, ವಾಹನ ನೋಂದಣಿ ರದ್ದತಿ

ಪರಿಷ್ಕೃತ ಶುಲ್ಕದ ವಿವರ ಹೀಗಿದೆ..

ಕಲಿಕಾ ಪರವಾನಗಿ– ₹200

ಕಲಿಕಾ ಪರವಾನಗಿ ನವೀಕರಣ– ₹200

ಅಂತರರಾಷ್ಟ್ರೀಯ ಪರವಾನಗಿ– ₹1,000

ಕಾಯಂ ಪರವಾನಗಿ– ₹200

ಕಾಯಂ ಪರವಾನಗಿ ನವೀಕರಣ– ₹200

ಚಾಲಕನ ಪರವಾನಗಿ ನವೀಕರಣ– ₹200

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ