₹10 ಲಕ್ಷ ಒಳಗಿನ ಬೆಲೆಯ Nissan ಮ್ಯಾಗ್ನೈಟ್ ಗೆಝಾ CVT ಸ್ಪೆಷಲ್ ಎಡಿಷನ್ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್

ಬೆಂಗಳೂರು: 2023ರ ಮ್ಯಾಗ್ನೈಟ್ ಗೆಝಾದ ಸ್ಪೆಷಲ್ ಎಡಿಷನ್ ಯಶಸ್ಸಿನ ಪ್ರೇರಣೆಯಿಂದ ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ₹9.84 ಲಕ್ಷ ಆರಂಭಿಕ ಬೆಲೆಯಲ್ಲಿ ಗೆಝಾ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

2023ರಲ್ಲಿ ಬಿಡುಗಡೆಯಾಗಿದ್ದ ಗೆಝಾ ಸ್ಪೆಷಲ್ ಎಡಿಷನ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಯಶಸ್ಸಿನಿಂದ ಹಾಗೂ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದೇ ಮಾದರಿಯಲ್ಲೇ ಈ ಬಾರಿ ಸಿವಿಟಿ ಸ್ಪೆಷಲ್ ಬಿಡುಗಡೆಯಾಗಿದೆ.

ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಅದ್ಭುತ ಸಂಗೀತ ಅನುಭವ ನೀಡಲಿದೆ ಎಂದು ಕಂಪನಿ ಹೇಳಿದೆ.

ಇದೇ ಮೊದಲ ಬಾರಿಗೆ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಕಾರಣಕ್ಕೆ ಗ್ರಾಹಕರು ಮತ್ತಷ್ಟು ಖುಷಿಪಡಬಹುದಾಗಿದೆ. ವಿಶೇಷವಾಗಿ ಇದು ನಿಸ್ಸಾನ್‌ನ ಅತ್ಯಂತ ಸುಲಭವಾಗಿ ಕೈಗೆಟಕುವ ಬಿ-SUV ವಿಭಾಗದ ಪ್ರೀಮಿಯಂ ಸಿವಿಟಿ ಟರ್ಬೊ ಆಗಿದೆ.

ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್‌ನ ವೈಶಿಷ್ಟ್ಯಗಳು

  • 22.86 ಸೆಂಮೀನ ಹೈ-ರೆಸೆಲ್ಯೂಶನ್ ಟಚ್‌ಸ್ಕ್ರೀನ್
  • ವೈರ್‌ಲೆಸ್ ಸಂಪರ್ಕ ಹೊಂದಿರುವ ಆಂಡ್ರಾಯ್ಡ್ ಕಾರ್ ಪ್ಲೇ
  • ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಸಿಸ್ಟಮ್
  • ಟ್ರಾಜೆಕ್ಟರಿ ಲೈನ್ ಹೊಂದಿರುವ ರೇರ್ ಕ್ಯಾಮೆರಾ
  • ನಿಸ್ಸಾನ್ ಆಪ್ ಆಧಾರಿತ ಆಂಬಿಯೆಂಟ್ ಲೈಟಿಂಗ್
  • ಐಚ್ಛಿಕವಾಗಿ ಬೀಜ್ ಬಣ್ಣದ ಪ್ರೀಮಿಯಂ ಸೀಟ್ ಅಪ್ ಹೋಲ್ ಸ್ಟರಿ
  • ವಿಶಿಷ್ಟವಾದ ಗೆಝಾ ಎಡಿಷನ್ ಬ್ಯಾಡ್ಜ್
  • ನಿಸ್ಸಾನ್ ಮ್ಯಾಗ್ನೈಟ್ ಸಿವಿಟಿ ವೇರಿಯಂಟ್ ಗಳಲ್ಲಿಯೇ ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಬಯಸುವವರಿಗೆ ಎಚ್ ಆರ್ 10 ಟರ್ಬೋ ಸಿವಿಟಿ ವೇರಿಯಂಟ್ ಲಭ್ಯವಿದೆ.

ಈ ಕಾರು ಬಿಡುಗಡೆ ಸಂದರ್ಭದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸ ಹರ್ಷ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: https://www.one.nissan.in/book-a-car  ಅಥವಾ www.nissan.in

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ