Nissan ದೇಶವ್ಯಾಪಿ ನಡೆಸುತ್ತಿದೆ AC ಉಚಿತ ತಪಾಸಣಾ ಶಿಬಿರ ಜೂನ್ 15ರವರೆಗೆ

ನಿಸ್ಸಾನ್

ಬೆಂಗಳೂರು: ನಿಸ್ಸಾನ್  ಮೋಟಾರ್  ಇಂಡಿಯಾ  ದೇಶಾದ್ಯಂತ  ಇರುವ  ತನ್ನ  ಗ್ರಾಹಕರ ಕಾರುಗಳ ಹವಾನಿಯಂತ್ರಿತ ಸಾಧನದ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಆ ಮೂಲಕ ಗ್ರಾಹಕರ ಸಂತೃಪ್ತಿಯ ಬಯಸುವ ತನ್ನ ಬದ್ಧತೆ ಪ್ರದರ್ಶಿಸಿದೆ.

ಎಸಿ ತಪಾಸಣಾ ಶಿಬಿರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ಹವಾನಿಯಂತ್ರಿತ ಸಾಧನ ಒಂದೇ ಅಲ್ಲದೆ, ನಿಸ್ಸಾನ್ ಗ್ರಾಹಕರು ತಮ್ಮ ಕಾರುಗಳ ಇತರ ಸರ್ವೀಸ್‌ಗಳನ್ನು ಈ ಅವಧಿಯಲ್ಲಿ ರಿಯಾಯಿತಿಯಲ್ಲಿ ಪಡೆಯಬಹುದು. ಇದು ನಿಸ್ಸಾನ್‌ನ ಅಧಿಕೃತ ಸರ್ವೀಸ್ ವರ್ಕ್‌ಶಾಪ್‌ಗಳಲ್ಲಿ ಮಾತ್ರ ಲಭ್ಯ.

  •  ನಿಸ್ಸಾನ್ ತನ್ನ 120 ಸರ್ವೀಸ್ ವರ್ಕ್ ಶಾಪ್‌ಗಳಲ್ಲಿ 2024ರ ಏಪ್ರಿಲ್ 15ರಿಂದ ಜೂನ್ 15ರವರೆಗೆ ಹವಾನಿಯಂತ್ರಿತ ಸಾಧನದ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ
  • ಗ್ರಾಹಕರು ಸೇವಾ ಶುಲ್ಕದಲ್ಲಿ ಶೇ 20ರವರೆಗೆ ರಿಯಾಯಿತಿ  ಮತ್ತು  ಮೌಲ್ಯವರ್ಧಿತ  ಸೇವೆಗಳ ಮೇಲೆ ಶೇ 10ರವರೆಗೆ ರಿಯಾಯಿತಿ ಪಡೆಯಬಹುದು

ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನ ಮಾಲೀಕರು ನಿಸ್ಸಾನ್ ಒನ್ ಆ್ಯಪ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆ ಪಡೆಯಲು ಸರ್ವೀಸ್ ಅಪಾಯಿಂಟ್‌ಮೆಂಟ್ ಪಡೆಯಬಹುದು. ಈ ಸರ್ವೀಸ್ ಶಿಬಿರಗಳು ಎಲ್ಲಾ  ನಿಸ್ಸಾನ್  ಮತ್ತು  ಡಾಟ್ಸನ್  ಬ್ರಾಂಡ್  ವಾಹನಗಳಿಗೆ  ಸರ್ವೀಸ್  ಒದಗಿಸುವ ಕಂಪನಿಯ ವ್ಯಾಪಕವಾದ 120 ಸರ್ವೀಸ್ ವರ್ಕ್ ಶಾಪ್ ಗಳಲ್ಲಿಯೂ ನಡೆಯಲಿದೆ.

ಈ ಶಿಬಿರದಲ್ಲಿ ಪಾಲ್ಗೊಳ್ಳುವ ಕಾರುಗಳ ಟಾಪ್ ವಾಶ್ ಕೂಡಾ ಒಳಗೊಂಡಿದೆ. ಜತೆಗೆ ಸಮಗ್ರ 20–ಪಾಯಿಂಟ್ ತಪಾಸಣೆ ನಡೆಸಲಾಗುತ್ತದೆ. ಕಾಲಕಾಲಕ್ಕೆ ನಿರ್ವಹಣಾ ಸರ್ವೀಸ್ ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಉಚಿತ ಪಿಕ್‌ಅಪ್‌ ಹಾಗೂ ಡ್ರಾಪ್‌ ಸೌಲಭ್ಯವೂ ಇದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ