ಬೆಂಗಳೂರಲ್ಲಿ ಸಾರ್ವಜನಿಕವಾಗಿ ಆಟೋದಲ್ಲಿ ಎಗ್ಗಿಲ್ಲದೇ ಧೂಮಪಾನ

ಧೂಮಪಾನ ಹಾನಿಕಾರಕ

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ದಲ್ಲಿ ಪ್ರಯಾಣಿಸುವಾಗ ಯುವಕನೊಬ್ಬ ಧೂಮಪಾನ ಮಾಡಿದ್ದಲ್ಲದೇ ಪ್ರಶ್ನಿಸಿದ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ವಿಡಿಯೋವನ್ನು ಶೇಕ್ ಮೂಯಿನ್ ಎನ್ನುವರು ಎಕ್ಸ್ ನಲ್ಲಿ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಏಪ್ರಿಲ್ 9ರಂದು ಈ ಘಟನೆ ನಡೆದಿದೆ.

ಆಟೋ ಚಾಲಕ ಸಹ ಪ್ರಯಾಣಿಕನಿಗೆ ಧೂಮಪಾನ ಮಾಡಿದ್ದರಿಂದ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆಟೋ ಚಾಲಕನ ವಿರುದ್ಧವೂ ದೂರು ದಾಖಲಾಗಿದೆ.https://twitter.com/sheikhenfield/status/1777110982667702370?t=pUneBVFp-JYjgaHqCF3BKg&s=19

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ