FASTag KYC ಅಪ್‌ಡೇಟ್ ಮಾಡಿಕೊಳ್ಳಲು ಇದೇ ಅ. 31 ಕೊನೆಯ ದಿನ

FASTag

ಟೋಲ್‌ ಇರುವ ಮಾರ್ಗದಲ್ಲಿ ಸಂಚರಿಸಲು ವಾಹನಗಳಿಗೆ ಅಗತ್ಯ ಇರುವ ಫಾಸ್ಟ್‌ಟ್ಯಾಗ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಸ್ಟ್ 1ರಿಂದ ಜಾರಿಗೆ ತಂದಿದೆ.

ಇದರನ್ವಯ ಫಾಸ್ಟ್‌ಟ್ಯಾಗ್ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಕಳೆದ 3ರಿಂದ 5 ವರ್ಷಗಳ ಅವಧಿಯಲ್ಲಿ ಪಡೆಯಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಬೆಕಾಗಿದೆ. ಐದು ವರ್ಷ ಮೀರಿದವರು ಅದನ್ನು ಬದಲಿಸಿ, ಹೊಸ ಟ್ಯಾಗ್ ಪಡೆಯಲು ಸೂಚಿಸಲಾಗಿದೆ.

ಪಡೆಯುವ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಿ ನೋಂದಾಯಿತ ವಾಹನಗಳೊಂದಿಗೆ ಜೋಡಣೆಯಾಗಿರಬೆಕು. ಅದರಲ್ಲಿ ವಾಹನದ ಚಾಸೀಸ್ ಸಂಖ್ಯೆ ಜೋಡಣೆಯಾಗಬೇಕಾದ್ದು ಕಡ್ಡಾಯ. ಹೊಸ ವಾಹನ ಖರೀದಿಯಾದ 90 ದಿನಗಳ ಒಳಗಾಗಿ ನೋಂದಣಿ ಕಡ್ಡಾಯಗಳಿಸಿ ಆದೇಶಿಸಲಾಗಿದೆ.

ಹೊಸ ಕಾನೂನು ಅನ್ವಯ, ಫಾಸ್ಟ್‌ಟ್ಯಾಗ್‌ ವಿತರಕರು ತಮ್ಮಿಂದ ವಿತರಣೆಯಾದ ಫಾಸ್ಟ್‌ಟ್ಯಾಗ್‌ಗಳ ಮಾಹಿತಿಯೊಂದಿಗೆ ವಾಹನಗಳ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇದರಲ್ಲಿ ವಾಹನ ಮುಂಭಾಗ ಹಾಗೂ ಹಿಂಭಾಗದ ಚಿತ್ರಗಳು ಅಪ್‌ಲೋಡ್ ಆಗಿರಬೇಕು. ವಾಹನ ಫಾಸ್ಟ್‌ಟ್ಯಾಗ್ ಅವರದ್ದೇ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಬೇಕಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೆವೈಸಿ ಅಪ್‌ಡೇಟ್ ಮಾಡಲು 2024ರ ಅ. 31ರಂದು ಕೊನೆಯ ದಿನವಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ