ಬೆಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನಕ್ಕೆ ತೆರಳುವ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಲು ಟ್ಯಾಕ್ಸಿ ಸೇವೆ ರ‍್ಯಾಪಿಡೊ ಮುಂದಾಗಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಏ.26ರಂದು ನಡೆಯಲಿದೆ. ಮತದಾನಕ್ಕೆ ತೆರಳುವ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಟ್ಯಾಕ್ಸಿ ಸೇವೆ ನೀಡುವ ರ್‍ಯಾಪಿಡೊ ಉಚಿತ ಸೇವೆ ನೀಡುವುದಾಗಿ ಹೇಳಿದೆ.
‘ಜವಾಬ್ದಾರಿಯುತ ಸವಾರಿ‘ ಎಂಬ ಪರಿಕಲ್ಪನೆಯ ಬಾಗವಾಗಿ ಈ ಸೇವೆ ನೀಡಲಾಗುತ್ತಿದೆ ಎಂದು ರ‍್ಯಾಪಿಡೊ ಹೇಳುತ್ತಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಮತದಾರರು ಏಪ್ರಿಲ್ 26 ರಂದು ‘VOTENOW’ ಕೋಡ್ ಅನ್ನು ಬಳಸಿಕೊಂಡು ಮತದಾನದ ಪಾಯಿಂಟ್‌ಗಳಿಗೆ ಉಚಿತ ಸವಾರಿಗಳನ್ನು ಪಡೆಯಬಹುದು ಎಂದು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬೆಂಗಳೂರಿನಲ್ಲಿರುವ ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸೇವೆಗಳನ್ನು ವಿಸ್ತರಿಸುವ ಮೂಲಕ ರಾಪಿಡೊ ಚುನಾವಣೆಯಲ್ಲಿ ನಾಗರಿಕರು ಒಳಗೊಳ್ಳುವಂತೆ ಮಾಡಲು ಮುಂದಾಗಿದೆ ಎಂದು ರಾಪಿಡೊ ಹೇಳಿಕೆಯಲ್ಲಿ ತಿಳಿಸಿದೆ
https://twitter.com/rapidobikeapp/status/1782791298287612099
ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಸಮಾನ ಪ್ರವೇಶವನ್ನು ಹೊಂದಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರಾಪಿಡೋದ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದ್ದಾರೆ.