ಸಾರಥಿ ಪರಿವಾಹನ್: ವಾಹನ ನೋಂದಣಿ, ಚಾಲನ ಪರವಾನಗಿ ಪಡೆಯುವುದಿನ್ನು ಸಲೀಸು

ಚಾಲನಾ ಪರವಾನಗಿಯಿಂದ ಹಿಡಿದು ವಾಹನ ನೋಂದಣಿವರೆಗೂ ಸಾರಿಗೆ ಇಲಾಖೆಯ ಎಲ್ಲಾ ಪ್ರಕ್ರಿಯೆಗಳನ್ನೂ ಡಿಜಿಟಲೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಾರ್ಥಿ ಪರಿವಾಹನ್ ಸೇವೆಯನ್ನು ಆರಂಭಿಸಿದೆ.

ಈಗಾಗಲೇ ಪರಿವಾಹನ ಆ್ಯಪ್ ಹೊಂದಿರುವವರಿಗೆ ಸಾರಥಿ ಪರಿವಾಹನ ಮೂಲಕ ಹೆಚ್ಚಿನ ಸೌಲಭ್ಯಗಳು ದೊರಕುತ್ತಿವೆ. ಈ ಒಂದು ಆ್ಯಪ್/ ಅಂತರ್ಜಾಲ ತಾಣದ ಮೂಲಕ ನಾಗರಿಕರ ಸಾರಿಗೆ ಸಂಬಂಧಿತ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ.

ಹಾಗಿದ್ದರೆ ಸಾರಥಿ ಪರಿವಾಹನ ಆ್ಯಪ್‌ ಮೂಲಕ ಯಾವೆಲ್ಲಾ ಸೌಕರ್ಯ ಪಡೆಯಬಹುದು

  • ಚಾಲನಾ ಪರವಾನಗಿ ಅರ್ಜಿ:
  • ವಾಹನ ಕಲಿಕಾ ಪರವಾನಗಿ ಆನ್‌ಲೈನ್‌: ಟೆಸ್ಟ್‌ ತೆಗೆದುಕೊಳ್ಳಲು ಸಮಯ ನಿಗದಿ, ಅರ್ಜಿಯ ಸ್ಥಿತಿಗತಿಯ ಮಾಹಿತಿ
  • ಶಾಶ್ವತ ಚಾಲನಾ ಪರವಾನಗಿ: ಕಲಿಕಾ ಪರವಾನಗಿಯನ್ನು ಕಾಯಂ ಪರವಾನಗಿಯನ್ನಾಗಿ ಪರಿವರ್ತಿಸಲು ಚಾಲನಾ ಪರೀಕ್ಷೆಗೆ ಸಮಯ ನಿಗದಿ ಹಾಗೂ ಇತರ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಸೌಲಭ್ಯ
  • ಪರವಾನಗಿ ನವೀಕರಣ: ಚಾಲನಾ ಪರವಾನಗಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಆನ್‌ಲೈನ್ ಮೂಲಕವೇ ನವೀಕರಿಸಿಕೊಳ್ಳಬಹುದು. ಇದರಿಂದ ಅನಗತ್ಯ ದಂಡ ಅಥವಾ ತೊಂದರೆ ತಪ್ಪಿಸಿಕೊಳ್ಳಲು ಸಾಧ್ಯ.
  • ನಕಲು ಪರವಾನಗಿ: ಮೂಲ ಚಾಲನಾ ಪರವಾನಗಿ ಕಳೆದುಹೋದರೆ, ಹಾನಿಯಾದರೆ ಅಥವಾ ಕಳೆದುಕೊಂಡರೆ ನಕಲು ಪರವಾನಗಿಗೆ ಈ ತಾಣದ ಮೂಲಕವೇ ಅರ್ಜಿ ಸಲ್ಲಿಸಬಹುದು.
  • ಅಂತರರಾಷ್ಟ್ರೀಯ ಚಾಲನಾ ಪರವಾನಗಿ: ವಿದೇಶಗಳಲ್ಲಿ ವಾಹನ ಚಾಲನೆ ಮಾಡಲು ನೀಡಲಾಗುವ ಅಂತರರಾಷ್ಟ್ರೀಯ ಚಾಲನಾ ಪರ್ಮಿಟ್‌ ಅನ್ನು ಸಾರಥಿ ಪರಿವಾಹನ್ ಮೂಲಕವೇ ಪಡೆಯಲು ಸಾಧ್ಯ.‌
  • ಪರವಾನಗಿ ಸೌಲಭ್ಯಗಳು
  • ಚಾಲನಾ ಪರವಾನಗಿಯಲ್ಲಿ ಇತರ ಬಗೆಯ ವಾಹನ ಸೇರ್ಪಡೆ: ದ್ವಿಚಕ್ರ ವಾಹನ ಚಾಲನಾ ಪರವಾನಗಿ ಹೊಂದಿದ್ದರೆ, ನಂತರ ಲಘು ಮೋಟಾರು ವಾಹನದ ಪರವಾನಗಿ ಪಡೆಯಬೇಕೆಂದಿದ್ದರೆ ಅದು ಈ ತಾಣದ ಮೂಲಕ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.
  • ವಿಳಾಸ ಬದಲಾವಣೆ ಸುಲಭ: ಚಾಲನಾ ಪರವಾನಗಿಯಲ್ಲಿ ವಿಳಾಸ ಬದಲಾವಣೆ ಸುಲಭ
  • ಪರವಾನಗಿಯ ಮಾಹಿತಿ: ವಿವಿಧ ಉದ್ದೇಶಗಳಿಗೆ ಚಾಲನಾ ಪರವಾನಗಿಯ ಮಾಹಿತಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು
  • ಆನ್‌ಲೈನ್ ಅಪಾಯಿಂಟ್‌ಮೆಟ್‌ಗಳು
  • ಚಾಲನಾ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ಇತರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಇತರ ಸೌಲಭ್ಯಗಳನ್ನು ಈ ಒಂದು ತಾಣದ ಮೂಲಕ ಪಡೆಯಬಹುದು.
  • ಆನ್‌ಲೈನ್ ಶುಲ್ಕ ಪಾವತಿ: ಚಾಲನಾ ಪರವಾನಗಿ ಸಾರಿಗೆ ಇಲಾಖೆಯ ವಿವಿಧ ಸೇವೆಗಳಿಗೆ ಶುಲ್ಕ ಪಾವತಿಸಲು ಸಾರಥಿ ಪರಿವಾಹನ ಪೋರ್ಟಲ್‌ನಲ್ಲಿ ಲಭ್ಯವಿರುವ ಹಲವು ಬಗೆಯ ಪಾವತಿ  ಸೌಕರ್ಯವನ್ನು ಬಳಸಿಕೊಳ್ಳಬಹುದು.
  • ಚಾಲನಾ ಕಲಿಕಾ ಶಾಲೆ:
  • ಚಾಲನಾ ಕಲಿಕಾ ಶಾಲೆಗಳ ನೋಂದಣಿ: ಚಾಲನಾ ಕಲಿಕಾ ಶಾಲೆಯ ಪರವಾನಗಿಯನ್ನು ಆನ್‌ಲೈನ್ ಮೂಲಕ ಪಡೆಯಲು ನೋಂದಣಿ ಹಾಗೂ ನವೀಕರಣ ಇಲ್ಲಿ ಸಾಧ್ಯ.
  • ಚಾಲನಾ ಕಲಿಕಾ ಶಾಲೆಗಳ ಪಟ್ಟಿ: ಸರ್ಕಾರಿ ನೋಂದಾಯಿತಿ ಚಾಲನಾ ಕಲಿಕಾ ಶಾಲೆಗಳ ಮಾಹಿತಿ ಪಡೆಯಬಹುದು.
  • ಆರ್‌ಟಿಒ ಕಚೇರಿಗೆ ಎಡತಾಕುವುದಕ್ಕಿಂತ ಮನೆಯಲ್ಲೇ ಕುಳಿತು ಸುಲಭವಾಗಿ ಸಾರಿಗೆ ಇಲಾಖೆಯ ಹಲವು ಕೆಲಸಗಳನ್ನು ಪೂರ್ಣಗೊಳಿಸಬಹುದು
  • ಸಲ್ಲಿಸಿದ ಅರ್ಜಿಗಳ ಹಾಗೂ ಕೋರಿದ ಸೇವೆಗಳ ಸ್ಥಿತಿಗತಿಯನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದು. ಇದು ಸಂಪೂರ್ಣ ಪಾರದರ್ಶಕವಾಗಿರಲಿದೆ.
  • ತ್ವರಿತವಾಗಿ ಕೆಲಸ ಆಗುವುದರಿಂದ ಅನಗತ್ಯ ಸಮಯ ವ್ಯರ್ಥ ತಗ್ಗಲಿದೆ
  • ದೇಶದ ಎಲ್ಲಾ ರಾಜ್ಯಗಳಲ್ಲೂ ಸಾರಥಿ ಪರಿವಾಹನ ಸೌಕರ್ಯ ಲಭ್ಯ.

ಹಾಗಿದ್ದರೆ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವುದು ಹೇಗೆ…?

  • ಸಾರಥಿ ಪರಿವಾಹನ್ ಪೋರ್ಟಲ್‌ಗೆ ಭೇಟಿ ನೀಡಿ
  • sarathi.parivahan.gov.in
  • ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಿ
  • ಯಾವ ರಾಜ್ಯದಲ್ಲಿ ವಾಹನ ಚಾಲನೆ ಮಾಡಲು ಅರ್ಜಿ ಸಲ್ಲಿಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ
  • ಅರ್ಜಿಯನ್ನು ಭರ್ತಿ ಮಾಡಿ
  • ಡ್ರೈವಿಂಗ ಲೈಸೆನ್ಸ್ ವಿಭಾಗದಲ್ಲಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿ
  • ಇಲ್ಲಿ ಅಗತ್ಯವಿರುವ ವೈಯಕ್ತಿಕ ಮಾಹಿತಿ ಹಾಗೂ ಯಾವ ರೀತಿಯ ಪರವಾನಗಿ ನಿಮಗೆ ಬೇಕು (ಕಲಿಕಾ ಅಥವಾ ಕಾಯಂ) ಬರೆಯಬೇಕು
  • ಅಗತ್ಯ ದಾಖಲೆಗಳನ್ನು ಅಲ್ಲಿಯ ಅಪ್‌ಲೋಡ್ ಮಾಡಿ: ಇದರಲ್ಲಿ ವೈಯಕ್ತಿಕ ಮಾಹಿತಿಗಳ ದಾಖಲೆ, ವಿಳಾಸ, ವಯಸ್ಸು ಹಾಗೂ ಕಲಿಕಾ ಪರವಾನಗಿ
  • ಟೆಸ್ಟ್‌ ಡ್ರೈವ್‌ಗೆ ಸಮಯ ಕಾಯ್ದಿರಿಸಿ
  • ಶುಲ್ಕ ಪಾವತಿಸಿ
  • ಟೆಸ್ಟ್‌ಗೆ ಹಾಜರಾಗಿ (ಕಲಿಕಾ ಪರವಾನಗಿಯಾದರೆ ಆನ್‌ಲೈನ್‌ ಟೆಸ್ಟ್‌ ಇರಲಿVisit the
  • ಪಾಸಾದ ನಂತರ ಅರ್ಜಿಯ ಸ್ಥಿತಿಗತಿ ಅರಿಯಿರಿ
  • ಪಾಸಾಗಿದ್ದರೆ ಆನ್‌ಲೈನ್‌ನಲ್ಲೇ ಚಾಲನಾ ಪರವಾನಗಿಯ ಪ್ರಿಂಟ್ ತೆಗೆದುಕೊಳ್ಳಿ (ಪ್ರಿಂಟ್ ಪಡೆಯಲು ಅರ್ಜಿಯ ಸಂಖ್ಯೆ ಹಾಗೂ ಜನ್ಮ ದಿನಾಂಕದ ಮಾಹಿತಿ ಅಗತ್ಯ)

ಹೀಗೆ ಸಾರಥಿ ಪರಿವಾಹನ್ ಪೋರ್ಟಲ್ ಮೂಲಕ ಸಾರಿಗೆ ಇಲಾಖೆಯ ಸೌಕರ್ಯಗಳನ್ನು ಸುಲಭವಾಗಿ ಪಡೆಯಬಹುದು ಎಂದು ಸಚಿವಾಲಯ ಹೇಳಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ