₹2 ಲಕ್ಷ ಬೆಲೆಯೊಳಗಿನ ಸೂಪರ್‌ ಬೈಕ್‌ಗಳಿವು

ಇವುಗಳನ್ನು ಸೂಪರ್ ಬೈಕ್‌ ಎಂದಾದರೂ ಕರೆಯಿರಿ ಅಥವಾ ಹಗುರವಾದ, ಶರವೇಗದಲ್ಲಿ ಸಾಗುವ ಮೋಟಾರ್‌ಸೈಕಲ್‌ ಎಂದಾದರೂ ಕರೆಯಿರಿ. ಜೀವನದಲ್ಲೊಮ್ಮೆಯಾದರೂ ಇಟ್ಟರೆ ಇಂಥ ಬೈಕ್ ಇಡಬೇಕು ಎಂಬ ಕನಸು ಪ್ರತಿಯೊಂದ ಯುವ ಮನಸ್ಸುಗಳೂ ಹೊಂದಿರುತ್ತವೆ. ಅಂಥ ಉತ್ಸಾಹಿ ಮನ್ಸುಗಳಿಗೆ ₹2 ಲಕ್ಷ ಒಳಗಿನ ಬೆಲೆಯಲ್ಲಿ ಲಭ್ಯವಿರುವ ಇಂಥ ಸೂಪರ್ ಬೈಕ್‌ಗಳ ವಿವರ ಇಲ್ಲಿದೆ.

  1. ಯಮಾಹಾ YZF- R15 V4 ಬೈಕ್

2008ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಯಮಾಹಾ ವೈಝಡ್‌ಎಫ್‌–ಆರ್‌15 ಬೈಕ್‌ ಇಡೀ ಮೋಟಾರ್ ಬೈಕ್‌ನ ನೋಡುವ ರೀತಿಯನ್ನೇ ಬದಲಿಸಿತು. ಆರ್‌15 ಎಂಬ ಮಾದರಿಯು ಭಾರತದ ಮೊದಲ ಲಿಕ್ವಿಡ್ ಕೂಲ್ಡ್‌ ಎಂಜಿನ್ ಹೊಂದಿದ ಮೊದಲ ಸ್ಪೋರ್ಟ್ಸ್‌ ಬೈಕ್‌. 155 ಸಿಸಿಯ ಲಿಕ್ವಿಡ್ ಕೂಲ್ಡ್‌ ಎಂಜಿನ್‌ 18.1 ಬಿಎಚ್‌ಪಿ ಅಶ್ವಶಕ್ತಿಯನ್ನು 10 ಸಾವಿರ ಆರ್‌ಪಿಎಂನಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಜತೆಗೆ 7,500 ಆರ್‌ಪಿಎಂನಲ್ಲಿ 14.2 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್‌ ಗೇರ್ ಬಾಕ್ಸ್‌, ಸ್ಲಿಪ್ಪರ್ ಕ್ಲಚ್‌ ಹೊಂದಿದೆ.

ನೂತನ ಮಾದರಿ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಡುಯಲ್ ಚಾನಲ್ ಎಬಿಎಸ್‌ ಹೊಂದಿದೆ. ಡೆಲ್ಟ್‌ ಬಾಕ್ಸ್ ಫ್ರೇಮ್‌ ಹೊಂದಿದ್ದು, ಇದರಿಂದ ವಾಹನ ನಿಯಂತ್ರಣ ಹಾಗೂ ಕಠಿಣ ಹಾದಿಯಲ್ಲಿ ಸುಗಮವಾಗಿ ಸಾಗುವ ಸಾಮರ್ಥ್ಯ ಹೊಂದಿದೆ. ಇಷ್ಟು ಮಾತ್ರವಲ್ಲ, ಇದೊಂದು ಸ್ಮಾರ್ಟ್ ಬೈಕ್ ಆಗಿದ್ದು, ಕರೆ ಸ್ವೀಕಾರ, ಎಸ್‌ಎಂಎಸ್‌ ಹಾಗೂ ಇಮೇಲ್‌ ಅಲರ್ಟ್ ಮಾಹಿತಿಯನ್ನೂ ನೀಡುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದೆ.

ಬೆಲೆ: ₹1.87 ಲಕ್ಷ (ಎಕ್ಸ್ ಶೋರೂಂ)

  • ಬಜಾಜ್ ಪಲ್ಸರ್ ಆರ್‌ಎಸ್‌200

ಬಜಾಜ್ ಕಂಪನಿಯ ಆರ್‌ಎಸ್200 ಬೈಕ್‌ನಲ್ಲಿ 199.5 ಸಿಸಿ ಲಿಕ್ವಿಡ್ ಕೂಲ್ಡ್‌ ಟ್ರಿಪಲ್‌ ಸ್ಪಾರ್ಕ್ ಡಿಟಿಎಸ್‌ ಐ 4ವಿ ಎಫ್‌ಐ ಎಂಜಿನ್ ಹೊಂದಿದೆ. 25.5 ಬಿಎಚ್‌ಪಿ ಅಶ್ವಶಕ್ತಿ ಹಾಗೂ 21.1 ನ್ಯೂಟನ್ ಮೀಟರ್‌ ಟಾರ್ಕ್‌ ಉತ್ಪಾದನೆ ಇದರ ಸಾಮರ್ಥ್ಯ. ಟೆಲಿಸ್ಕೋಪಿಕ್‌ ಹಾಗೂ ಆ್ಯಂಟಿ ಫ್ರಿಕ್ಷನ್‌ ಬುಷ್‌ ಹಾಗೂ ನೈಟ್ರಾಕ್ಸ್‌ ಮೊನೊ ಶಾಕ್ಸ್‌ ಅಬ್ಸಾರ್ಬರ್‌ ಅನ್ನು ಹಿಂಬದಿಯಲ್ಲಿ ಹೊಂದಿದೆ. ಇದರಲ್ಲೂ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌, ಡುಯಲ್ ಚಾನಲ್ ಎಬಿಎಸ್‌ ಹಾಗೂ ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

ಇದರ ಬೆಲೆ ₹1.73 ಲಕ್ಷ, ಎಕ್ಸ್ ಶೋರೂಂ

3. ಸುಜುಕಿ ಗಿಕ್ಸೆರ್‌ ಎಸ್‌ಎಫ್‌250

ಸುಜುಕಿ ಗಿಕ್ಸೆರ್‌  ಎಸ್‌ಎಫ್‌ 250 ಬೈಕ್‌ನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ. 26.1 ಬಿಎಚ್‌ಪಿ ಅಶ್ವಶಕ್ತಿಯನ್ನು 9,300 ಆರ್‌ಪಿಎಂನಲ್ಲಿ ಉತ್ಪಾದಿಸುತ್ತದೆ. ಹಾಗೂ 22.2 ನ್ಯೂಟನ್ ಮೀಟರ್ ಟಾರ್ಕ್‌ ಅನ್ನು 7,300 ಆರ್‌ಪಿಎಂನಲ್ಲಿ ಉತ್ಪಾದಿಸುತ್ತದೆ.

ಆರು ಸ್ಪೀಡ್ ಗೇರ್‌ ಬಾಕ್ಸ್ ಇದು ಹೊಂದಿದೆ. ಆರಾಮದಾಯಕ ರೈಡಿಂಗ್‌ಗೆ ಅಗತ್ಯಕ್ಕೆ ತಕ್ಕಂತೆ ಏರೋಡೈನಾಮಿಕ್ಸ್ ದೇಹ ಇದರದ್ದಾಗಿದೆ. ಇತರ ಮೋಟಾರ್‌ ಸೈಕಲ್‌ನಂತೆ ಗಿಕ್ಸರ್‌ ಎಸ್‌ಎಫ್‌ 250 ಡುಯಲ್ ಚಾನಲ್ ಎಬಿಎಸ್‌ ಹೊಂದಿದೆ. ಹೆಡ್‌ಲ್ಯಾಂಪ್ ಒಳಗೊಂಡಂತೆ ಎಲ್ಲಾ ದೀಪಗಳೂ ಎಲ್‌ಇಡಿಯವಾಗಿವೆ. ಇದರೊಂದಿಗೆ ಟರ್ನ್‌ ಬೈ ಟರ್ನ್‌ ನ್ಯಾವಿಗೇಷನ್‌, ಮಿಸ್ಡ್‌ ಕಾಲ್‌ ಅಲರ್ಟ್‌, ಎಸ್‌ಎಂಎಸ್‌, ವಾಟ್ಸ್‌ಆ್ಯಪ್ ಅಲರ್ಟ್‌ ಹಾಗೂ ಕಾಲರ್ ಐಡಿ ಕೂಡಾ ಹೊಂದಿದೆ. ಅತಿ ವೇಗದ ಚಾಲನೆಯ ಅಲರ್ಟ್‌ ಈ ಬೈಕ್ ನೀಡಲಿದೆ. ತಲುಪಬೇಕಾದ ಸ್ಥಳಕ್ಕೆ ಬೇಕಾದ ಸಮಯ, ಫೋನ್‌ ಬ್ಯಾಟರಿ ಎಷ್ಟು ಇದೆ ಎಂಬ ಮಾಹಿತಿ, ಗೇರ್ ಶಿಫ್ಟ್‌ ಇಂಡಿಕೇಟರ್‌ ಮಾಹಿತಿ ಕೂಡಾ ಲಭ್ಯ.

ಬೆಲೆ ₹1.92 ಲಕ್ಷ (ಎಕ್ಸ್ ಶೋರೂಂ)

  • ಕೆಟಿಎಂ ಆರ್‌ಸಿ 125

ಮೊಟೊಜಿಪಿ ವಿನ್ಯಾಸದಿಂದ ಪ್ರೇರಣೆ ಹೊಂದಿದ ಕೆಟಿಎಂ ಆರ್‌ಸಿ 125. 124.7 ಸಿಸಿ ಲಿಕ್ವಿಡ್ ಕೂಲ್ಡ್‌ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಎಂಜಿನ್‌ ಇದರದ್ದು. 14.3 ಬಿಎಚ್‌ಪಿ ಅಶ್ವಶಕ್ತಿಯನ್ನು 9,250 ಅರ್‌ಪಿಎಂನಲ್ಲಿ ಉತ್ಪಾದಿಸುತ್ತದೆ. 8,000 ಆರ್‌ಪಿಎಂನಲ್ಲಿ 12 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದರದ್ದು. ಹಗುರ ಸ್ಪ್ಲಿಟ್‌ ಟ್ರೆಲ್ಲಿಸ್ ಫ್ರೇಮ್‌ ಅನ್ನು ಈ ಬೈಕ್ ಹೊಂದಿದೆ. ಆರ್‌ಸಿ 125 ಅಡ್ಜೆಸ್ಟಬಲ್ ಹ್ಯಾಂಡಲ್‌ಬಾರ್ಸ್ ಹಾಗೂ ಎಲ್‌ಸಿಡಿ ಡ್ಯಾಶ್‌ಬೋರ್ಡ್‌ ಹೊಂದಿದೆ. ಇದರಲ್ಲಿ ಬೈಕ್‌ನ ವೇಗ, ಆರ್‌ಪಿಎಂ, ಗೇರ್‌ ಮಾಹಿತಿ, ಸರಾಸರಿ ವೇಗ, ಇಂಧನ ಕ್ಷಮತೆಯ ಮಾಹಿತಿ ಲಭ್ಯ. ಗರಿಷ್ಠ ಆರ್‌ಪಿಎಂ ಹಾಗೂ ಶಿಫ್ಟ್‌ನ ಹೊಂದಿಸಲೂ ಅವಕಾಶವಿದೆ. 43ಮಿ.ಮೀ.ಯ ಫೋರ್ಕ್ಸ್‌ ಹಾಗೂ ಹೊಂದಿಸಬಹುದಾದ ಮೊನೊ ಶಾಕ್ಸ್‌ ಹಿಂಭಾಗದಲ್ಲಿ ಇದೆ. ಸಿಂಗಲ್ ಚಾನಲ್ ಎಬಿಎಸ್‌ ಇದರದ್ದು.

ಬೆಲೆ: ₹1.90 ಲಕ್ಷ (ಎಕ್ಸ್ ಶೋರೂಂ)

5. ಹೀರೊ ಕರೀಜ್ಮಾ ಎಕ್ಸ್‌ಎಂಆರ್

210 ಸಿಸಿ ಲಿಕ್ವಿಡ್ ಕೂಲ್ಡ್‌ ಡಿಒಎಚ್‌ಸಿ ಎಂಜಿನ್‌ ಹೊಂದಿರುವ ಹೀರೋ ಕರೀಜ್ಮಾ ಎಕ್ಸ್ಎಂಆರ್‌ 25.15 ಬಿಎಚ್‌ಪಿ ಅಶ್ವಶಕ್ತಿಯನ್ನು 9,250 ಆರ್‌ಪಿಎಂನಲ್ಲಿ ಉತ್ಪಾದಿಸುತ್ತದೆ. 20.4 ನ್ಯೂಟನ್ ಮೀಟರ್ ಟಾರ್ಕ್ ಅನ್ನು 7,250 ಆರ್‌ಪಿಎಂನಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೈ ಟೆನ್ಸಿಲ್‌ ಸ್ಟೀಲ್ ಟ್ರೆಲಿಸ್‌ ಫ್ರೇಮ್‌ ಅನ್ನು ಇದು ಹೊಂದಿದೆ. ಇದು ವೇಗದಲ್ಲಿ ಸಾಗುವಾಗ ಬೈಕ್ ಅನ್ನು ಹಿಡತಕ್ಕೆ ಪಡೆಯಲು ನೆರವಾಗಲಿದೆ.

ಈ ವಿಭಾಗದಲ್ಲಿ ಹೊಂದಿಸಬಹುದಾದ ವಿಂಡ್‌ಶೀಲ್ಡ್‌ ಅನ್ನು 30 ಮಿ.ಮೀ.ಯಷ್ಟು ಮೇಲೆ ಕೆಳಗೆ ಮಾಡುವ ಸೌಕರ್ಯವಿರುವ ಏಕೈಕ ಬೈಕ್ ಇದು. ಎಲ್ಲಾ ದೀಪಗಳೂ ಎಲ್‌ಇಡಿ, ಡುಯಲ್ ಚಾನಲ್ ಎಬಿಎಸ್‌, 6 ಹಂತಗಳ ಹೊಂದಿಸಬಹುದಾದ ಹಿಂಬದಿಯ ಮೊನೊ ಶಾಕ್ಸ್‌, ಕ್ಲಿಪ್‌ ಆನ್‌ ಹ್ಯಾಂಡಲ್‌ಬಾರ್ಸ್‌ ಹಾಗೂ ಯುಎಸ್‌ಬಿ ಫಾಸ್ಟ್ ಚಾರ್ಜಿಂಗ್ ಪೋರ್ಟ್‌ ಇದರದ್ದು. ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ಹೊಂದಿರುವ ಈ ಬೈಕ್‌ ಸುಮಾರು 35 ಸೌಕರ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕರೆಗಳು ಹಾಗೂ ಎಸ್‌ಎಂಎಸ್ ಅಲರ್ಟ್‌, ಗೇರ್ ಇಂಡಿಕೇಟರ್‌, ಬ್ಯಾಟರಿ ಸ್ಟೇಟಸ್‌ ಹಾಗೂ ಆ್ಯಂಬಿಯಂಟ್ ಲೈಟ್ ಸೆನ್ಸರ್‌.

ಬೆಲೆ: ₹1.80 ಲಕ್ಷ (ಎಕ್ಸ್ ಶೋರೂಂ)

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ