ಟಾಟಾ ಮೋಟರ್ಸ್ 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹5,566 ಕೋಟಿ ನಿವ್ವಳ ಲಾಭಗಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹3,203 ಕೋಟಿ ಲಾಭ ಗಳಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 74ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯು, ಗುರುವಾರ ಷೇರುಪೇಟೆಗೆ ತಿಳಿಸಿದೆ.
ದೇಶೀಯವಾಗಿ ಕಂಪನಿಯ ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಕಳೆದ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹1.03 ಲಕ್ಷ ಕೋಟಿ ವರಮಾನ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ₹1.09 ಲಕ್ಷ ಕೋಟಿ ಗಳಿಸಿದೆ. ‘ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಎಲ್ಲ ವರ್ಗದ ವ್ಯಾಪಾರವು ಸದೃಢವಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲೂ ವ್ಯಾಪಾರದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವ ಭರವಸೆಯಿದೆ’ ಎಂದು ಟಾಟಾ ಮೋಟರ್ಸ್ ಗ್ರೂಪ್ನ ಮುಖ್ಯ ಹಣಕಾಸು ಅಧಿಕಾರಿ ಪಿ.ಬಿ. ಬಾಲಾಜಿ ತಿಳಿಸಿದ್ದಾರೆ.
ಕಂಪನಿಯು ಷೇರಿನ ಮೌಲ್ಯವು ಶೇ 1.02ರಷ್ಟು ಇಳಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹1,144 ಆಗಿದೆ.