ಆಫ್‌ರೋಡ್‌ ಪ್ರಿಯರಿಗೆ ಕೈಗೆಟಕುವ ಬೆಲೆಗೆ 4X4 ಕಾರು ಪರಿಚಯಿಸುತ್ತಿರುವ ಹೊಸ ಗೂರ್ಖಾ

ಫೋರ್ಸ್ ಗೂರ್ಖಾ

ಫೋರ್ಸ್‌ ಮೋಟಾರ್ಸ್‌ ಕಂಪನಿಯು 4X2 ಮಾದರಿಯ ಗೂರ್ಖಾ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಮೂರು ಬಾಗಿಲು ಕಾರು ಮಾದರಿಯಾಗಿದ್ದು, ಆಫ್‌ರೋಡರ್‌ಗಳಿಗೆ ಹೆಚ್ಚು ಸೂಕ್ತವಾಗಿದೆ. 

ಆ ಮೂಲಕ ಮಹಿಂದ್ರಾ ಥಾರ್‌ RWDಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಳಿಯಲು ಸಿದ್ಧತೆ ನಡೆಸಿದೆ. ಗೂರ್ಖಾ 4X2 ಕಾರಿನ ಬೆಲೆಯುವ 4X4 ಮಾದರಿಗಿಂತಲೂ ಅಗ್ಗ. ಈ ಮಾದರಿಯಲ್ಲೇ ಡಿಫರೆನ್ಶಿಯಲ್ ಲಾಕ್‌ ಮತ್ತು ಮ್ಯಾನುಯಲ್ ಟ್ರಾನ್ಸ್‌ಫರ್‌ ಸೌಲಭ್ಯ ಸಿಗಲಿದೆ. ಇದರ ಒಟ್ಟಾರೆ ವಿನ್ಯಾಸ ಹಾಗೂ ಸೌಲಭ್ಯಗಳು 4X4ಗೆ ಸರಿಸಮನಾಗಿದೆ.

ಗೂರ್ಖಾ 4X2 ಕಾರಿನಲ್ಲಿ 2.6ಲೀ. ಸಾಮರ್ಥ್ಯದ 4 ಸಿಲಿಂಡರ್‌ ಡೀಸೆಲ್ ಎಂಜಿನ್‌ ಹೊಂದಿದೆ. 138 ಬಿಎಚ್‌ಪಿ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಇದು 5 ಸ್ಪೀಡ್‌ ಗೇರ್‌ ಬಾಕ್ಸ್ ಹೊಂದಲಿದೆ ಎಂದು ವರದಿಯಾಗಿದೆ.

ಕಾಂಪ್ಯಾಕ್ಟ್‌ ಕಾರುಗಳ ಮಾದರಿಗೆ ಸಿಗುವ ತೆರಿಗೆ ರಿಯಾಯಿತಿಗೆ ಗೂರ್ಖಾ 4X2 ಅರ್ಹತೆ ಪಡೆದಿಲ್ಲ. ಈ ರಿಯಾಯಿತಿ ಪಡೆಯಲು ಎಂಜಿನ್ ಸಾಮರ್ಥ್ಯ ಗರಿಷ್ಠ 1,500 ಸಿ.ಸಿ. ಮಾತ್ರ ಇರಬೇಕು. ಹೀಗಾಗಿ ಥಾರ್‌ RWD ಈ ಸೌಲಭ್ಯವನ್ನು ಪಡೆದಿತ್ತು. ಹೀಗಾಗಿ ಮಹೀಂದ್ರ ಕಾರಿನ ಬೆಲೆಯೇ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ