2024ರ ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳಿವು…

ಹೆಚ್ಚು ಮಾರಾಟವಾದ ಟಾಪ್‌ ಕಾರುಗಳು

ಮುಂಗಾರು ಆರಂಭಗೊಂಡಿದೆ. ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಮತ್ತೆ ತಲ್ಲೀನರಾಗಿದ್ದಾರೆ. ಹಣ್ಣಿನ ರಾಜ ಮಾವಿನಂತೆಯೇ ಈ ಬಾರಿ ಬೇಸಿಗೆಯಲ್ಲಿ ಭಾರತದಲ್ಲಿ ಕಾರುಗಳಿಗೆ ಭರ್ಜರಿ ಬೇಡಿಕೆ ಉಂಟಾಗಿತ್ತು. ಹೀಗೆ ಕಳೆದ ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಕಂಡ ಟಾಪ್‌ 10 ಕಾರುಗಳ ಪಟ್ಟಿ ಇಲ್ಲಿವೆ.

ಈ ಪಟ್ಟಿಯಲ್ಲಿ ಎಂದಿನಂತೆ ಮಾರುತಿ ಸುಜುಕಿ, ಟಾಟಾ, ಹ್ಯುಂಡೇ ಹಾಗೂ ಮಹೀಂದ್ರಾ ಕಂಪನಿಯ ಕಾರುಗಳೂ ಇವೆ.

ಟಾಪ್‌ 3 ಸ್ಥಾನಗಳನ್ನು ಮಾರುತಿ ಹಾಗೂ ಟಾಟಾ ಹಂಚಿಕೊಂಡಿವೆ. ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಂಚ್‌ ಹಾಗೂ 3ನೇ ಸ್ಥಾನದಲ್ಲಿ ಡಿಝೈರ್ ಇದೆ. ಉಳಿದಂತೆ ಮಾರುತಿ ವ್ಯಾಗನ್‌ ಆರ್‌ 5ನೇ ಹಂತ, 6, 7, 9 ಹಾಗೂ 10ನೇ ಸ್ಥಾನವೂ ಮಾರುತಿಯ ಬ್ರೀಝಾ, ಎರ್ಟಿಗಾ, ಬಲೆನೊ ಹಾಗೂ ಫ್ರಾಂಕ್ಸ್‌ ಪಡೆದಿವೆ.

ಹ್ಯುಂಡೇ ಕ್ರೇಟಾ 4ನೇ ಸ್ಥಾನದಲ್ಲಿದ್ದರೆ, ಮಹೀಂದ್ರಾ ಸ್ಕಾರ್ಪಿಯೊ 8ನೇ ಸ್ಥಾನದಲ್ಲಿದೆ.

ಮೇ 2024ರಲ್ಲಿ ಹೆಚ್ಚು ಮಾರಾಟಾದ ಟಾಪ್ ಹತ್ತು ಕಾರುಗಳ ಪಟ್ಟಿ

  1. ಮಾರುತಿ ಸ್ವಿಫ್ಟ್‌– 19,393
  2. ಟಾಟಾ ಪಂಚ್– 18,949
  3. ಮಾರುತಿ ಡಿಝೈರ್– 16,061
  4. ಹ್ಯುಂಡೇ ಕ್ರೇಟಾ – 14,662
  5. ಮಾರುತಿ ವ್ಯಾಗನ್‌ ಆರ್ – 14,492
  6. ಮಾರುತಿ ಬ್ರೀಝಾ – 14,186
  7. ಮಾರುತಿ ಎರ್ಟಿಗಾ – 13,893
  8. ಮಹೀಂದ್ರಾ ಸ್ಕಾರ್ಪಿಯೊ – 13,717
  9. ಮಾರುತಿ ಬಲೆನೊ – 12,842
  10. ಮಾರುತಿ ಫ್ರಾಂಕ್ಸ್‌– 12,681
Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ