ಟಿವಿಎಸ್ ಮೋಟರ್ ಕಂಪನಿಯು ತನ್ನ ಬ್ಯಾಟರಿಚಾಲಿತ ದ್ವಿಚಕ್ರ ವಾಹನವಾದ ಟಿವಿಎಸ್ ಐಕ್ಯೂಬ್ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
ಇದು 2.2 ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.
‘ಎರಡು ಗಂಟೆಯೊಳಗೆ ಬ್ಯಾಟರಿಯು ಪೂರ್ಣ ಚಾರ್ಜ್ ಆಗಲಿದೆ. ಒಂದು ಬಾರಿಗೆ ಚಾರ್ಜ್ ಮಾಡಿದರೆ 100 ಕಿ.ಮೀ. ಸಂಚರಿಸಬಹುದಾಗಿದೆ’ ಎಂದು ಕಂಪನಿಯ ಉಪಾಧ್ಯಕ್ಷ ಸೌರಬ್ ಕಪೂರ್ ತಿಳಿಸಿದ್ದಾರೆ.
ಜೂನ್ 30ರ ವರೆಗೆ ಎಲೆಕ್ಟ್ರಿಕ್ ವಾಹನಗಳಿಗೆ ನಿಗದಿಪಡಿಸಿರುವ ಸಬ್ಸಿಡಿ ಮತ್ತು ಕ್ಯಾಷ್‌ಬ್ಯಾಕ್ ಸೌಲಭ್ಯ ದೊರೆಯಲಿದೆ. ಬೆಂಗಳೂರಿನಲ್ಲಿ ಇದರ ಎಕ್ಸ್ ಷೋ ರೂಂ ಬೆಲೆ ₹94,999 ಆಗಿದೆ ಎಂದು ಹೇಳಿದ್ದಾರೆ.
ಐದು ಶ್ರೇಣಿಗಳಲ್ಲಿ ದೊರೆಯಲಿದ್ದು, ಹೊಸೂರು ಘಟಕದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ