ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚಿದ ಅಪಘಾತ: ರಾತ್ರಿವೇಳೆ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿಷೇಧ

ಮೈಕ್ರೊಸಾಪ್ಟ್ ಡಿಸೈನ್‌ ಎಐ ಚಿತ್ರ

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಅತಿ ವೇಗವೇ ಮುಖ್ಯ ಕಾರಣ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ದ್ವಿ ಚಕ್ರ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶಿಸಿದ್ದಾರೆ.

ದ್ವಿ ಚಕ್ರ ವಾಹನಗಳ ಓಡಾಟವನ್ನು ರಾತ್ರಿ 10 ರಿಂದ ಬೆಳಿಗ್ಗೆ 5ಗಂಟೆವರೆಗೆ ನಿಷೇಧಿಸಲಾಗಿದೆ. ದ್ವಿಚಕ್ರವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಮಿತಿಗೊಳಿಸಲಾಗಿದೆ.

ಇದರೊಂದಿಗೆ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಎಲ್ಲ ಸಮಯದಲ್ಲಿ ವೇಗದ ಮಿತಿಯನ್ನು ಹೇರಲಾಗಿದೆ.

ಎಲ್ಲ ವರ್ಗದ ಸರಕು (ಗೂಡ್ಸ್) ಸಾಗಣೆ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಮಿತಿಗೊಳಿಸಲಾಗಿದೆ.

9 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು (ಎಂ 2 ಮತ್ತು ಎಂ3 ವರ್ಗದ ವಾಹನಗಳು) ಕರೆದೊಯ್ಯುವ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ. ಮಿತಿಗೊಳಿಸಲಾಗಿದೆ.

8 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು (ಎಂ 1 ವರ್ಗದ ವಾಹನಗಳು) ಕರೆದೊಯ್ಯುವ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ಮಿತಿಗೊಳಿಸಲಾಗಿದೆ.

ಇಂದಿನಿಂದಲೇ ಈ ಆದೇಶ ಜಾರಿಯಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ