ದೆಹಲಿ ಪ್ರೀಮಿಯಂ ಬಸ್ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಸ್‌ಗಳನ್ನು ನಿರ್ವಹಿಸಲು ನವದೆಹಲಿಯ ಸಾರಿಗೆ ಇಲಾಖೆಯಿಂದ ಉಬರ್ ಪರವಾನಗಿಯನ್ನು ಪಡೆದಿದೆ.
ನವದೆಹಲಿಯು ಬಸ್ ಕಾರ್ಯಾಚರಣೆಗೆ ಪರವಾನಗಿ ನೀಡಿದ ಮೊದಲ ರಾಜ್ಯವಾಗಿದೆ. ಉಬರ್, ದೆಹಲಿ ಪ್ರೀಮಿಯಂ ಬಸ್ ಯೋಜನೆಯಡಿ ಪರವಾನಗಿ ಪಡೆದ ಮೊದಲ ಅಗ್ರಿಗೇಟರ್ ಆಗಿದೆ ಎಂದು ಕಂಪನಿ ತಿಳಿಸಿದೆ.
‘ರಾಷ್ಟ್ರರಾಜಧಾನಿಯಲ್ಲಿ ಬಸ್‌ಗಳಿಗೆ ಉಬರ್ ರೈಡ್‌ಗಳ ಅನುಕೂಲವನ್ನು ಅಧಿಕೃತವಾಗಿ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ’ ಎಂದು ಉಬರ್ ಶಟಲ್ ಇಂಡಿಯಾ ಮುಖ್ಯಸ್ಥ ಅಮಿತ್ ದೇಶಪಾಂಡೆ ಹೇಳಿದ್ದಾರೆ.