ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಪ್ರಮುಖ ಕಂಪನಿಗಳ 5 ಬಜೆಟ್‌ ಕಾರುಗಳು

Upcoming top 5 budget cars in India

ಬೆಳೆಯುತ್ತಿರುವ ಭಾರತದ ಕಾರು ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಧ್ಯಮ ವರ್ಗದವರನ್ನೇ ಪ್ರಮುಖವಾಗಿಟ್ಟುಕೊಂಡು ಕಾರುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವುಗಳು ಅತಿಶೀಘ್ರದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ.

ಮಾರುತಿ ಸುಜುಕಿ ಡಿಝೈರ್, ಸ್ಕೊಡಾ ಕಿಲಾಕ್‌, ಹೊಂಡಾ ಅಮೇಜ್, ಕಿಯಾ ಸೈರೊಸ್‌ ಹಾಗೂ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ. ಈ ಕಾರುಗಳು ಹೊಸ ಫೀಚರ್‌ಗಳನ್ನು ಮಾತ್ರವಲ್ಲ, ಬೆಲೆಯಲ್ಲೂ ಕಡಿಮೆ ಇರುವುದು ಮಾರುಕಟ್ಟೆಯಲ್ಲಿ ನಿರೀಕ್ಷೆ ಹುಟ್ಟಿಸಿವೆ.

ಮಾರುತಿ ಸುಜುಕಿ ಡಿಝೈರ್

ಮಾರುತಿ ಸುಜಿಕಿ ಡಿಝೈರ್‌ ಕಾರು ನವೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಸ್ವಿಫ್ಟ್‌ ಕಾರಿನ ಫೇಸ್‌ಲಿಫ್ಟ್‌ ಮೂಲಕ ಹೊಸ ಕಾರು ಪರಿಚಯಿಸಿರುವ ಕಂಪನಿ, ಇದೀಗ ಅದೇ ಮಾದರಿಯ ಸೆಡಾನ್‌ ಮಾದರಿ ಡಿಝೈರ್‌ಗೂ ಫೇಸ್‌ಲಿಫ್ಟ್‌ ತಂದಿದೆ. ಈ ಬಾರಿ Dezire interiors ಉತ್ತಮವಾಗಿದೆ. ಇದೇ ಮೊದಲ ಬಾರಿಗೆ Sunroof ನೀಡಲಾಗಿದೆ. 5,700 ಆರ್‌ಪಿಎಂ ಮತ್ತು 111.7 ಎನ್‌ಎಂ ಟಾರ್ಕ್‌ ಅನ್ನು 4,300 ಆರ್‌ಪಿಎಂ ಉತ್ಪಾದಿಸಬಲ್ಲದು. 5 speed ಮ್ಯಾನುಯಲ್‌ ಅಥವಾ 5 ಸ್ಪೀಡ್‌ ಆಟೊಮ್ಯಾಟಿಕ್‌ ಗೇರ್‌ಬಾಕ್ಸ್ ಅನ್ನು ಇದು ಹೊಂದಿದೆ.

ಸ್ಕೋಡಾ ಕಿಲಾಕ್‌ SUV

ಉದ್ದದಲ್ಲಿ 4 ಮೀಟರ್‌ ಒಳಗಿನ ಕಾರುಗಳ ಸಾಲಿಗೆ ಸ್ಕೊಡಾ ಹೊಸ ಕಾರನ್ನು ಪರಿಚಯಿಸುತ್ತಿದೆ. Skoda Kilaq ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಈಗಗಲೇ ಹೇಳಲಾಗುತ್ತಿದೆ. Kushaq ಮತ್ತು Slavia ಕಾರುಗಳಂತೆ  Kilaq ಕೂಡಾ MQB AO IN ಪ್ಲಾಟ್‌ಫಾರ್ಮ್‌ ಆಧಾರಿತ ಕಾರಾಗಿದೆ. 1 ಲೀಟರ್‌ ಟರ್ಬೊಚಾರ್ಜ ಪೆಟ್ರೋಲ್‌ ಎಂಜಿನ್‌ ಅನ್ನು ಇದು ಹೊಂದಿದೆ. 114 HP ಹಾಗೂ  178 Nm ಟಾರ್ಕ್‌ ಅನ್ನು ಇದು ಉತ್ಪಾದಿಸಬಲ್ಲದು. 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಇದು ಹೊಂದಿದೆ. SUV ಮಾದರಿಯಲ್ಲಿರುವ ಈ ಕಾರು 2025ರಿಂದ ರಸ್ತೆಗಿಳಿಯಲಿದೆ.

Honda Amaze

ಹೊಂಡಾ ಅಮೇಜ್‌ ಈಗಾಗಲೇ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದ ಕಾರು. ಇದೀಗ ಈ ಕಾರು ಹೊಸ ಸ್ವರೂಪದೊಂದಿಗೆ ಮರಳಿ ಬರುತ್ತಿದೆ. ಹೊರಗಿನ ಹಾಗೂ ಒಳಾಂಗಣ ಸೌಕರ್ಯಗಳನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಬದಲಿಸಲಾಗಿದೆ. City ಹಾಗೂ Elevate ಮಾದರಿಯ ಕಾರುಗಳ ಪ್ಲಾಟ್‌ಫಾರ್ಮ್‌ ಮೇಲೆಯೇ ಇದನ್ನು ನಿರ್ಮಿಸಲಾಗಿದೆ. ಕಂಪನಿಯು ಕಾರಿನಲ್ಲಿರುವ ಸೌಕರ್ಯಗಳ ಕುರಿತು ಈವರಗೂ ಅಧಿಕೃತವಾಗಿ ಏನನ್ನು ಹೇಳದಿದ್ದರೂ, ಸನ್‌ರೂಫ್ ಇರಲಿದೆ ಎಂದೆನ್ನಲಾಗಿದೆ.

ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ, ದೊಡ್ಡದಾದ ಇನ್ಫೊಟೈನ್ಮೆಂಟ್‌ ಸಿಸ್ಟಂ ಇರಲಿದೆ. 1.2 ಲೀಟರ್ ನ್ಯಾಚುರಲ್‌ ಆಸ್ಪಿರೇಷನ್‌ ಪೆಟ್ರೋಲ್ ಎಂಜಿನ್‌ ಹೊಂದಿರಲಿದೆ. ಸಿವಿಟಿ ಆಟೊಮ್ಯಾಟಿಕ್‌ ಹಾಗೂ 5 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಕಾರು ಇದಾಗಿರಲಿದೆ.

Kia Syros

ದಕ್ಷಿಣ ಕೊರಿಯಾದ ಕಾರು ಕಂಪನಿಯ ಎರಡು ಕಾರುಗಳಾದ Sonet ಹಾಗೂ Seltos ಜನಪ್ರಿಯತೆ ಪಡೆದುಕೊಂಡಿದ್ದು, ಇದೀಗ ಇದರ ನಡುವಿನ ಕಾರು Syros ಬಿಡುಗಡೆಗೆ ಕಂಪನಿ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಪೆಟ್ರೋಲ್‌ ಹಾಗೂ EV ಮಾದರಿಯ ಕಾರನ್ನು ಕಂಪನಿ ಪರಿಚಯಿಸುತ್ತಿದೆ. ಫ್ರಂಟ್‌ ವೀಲ್‌ ಡ್ರೈವ್ ಕಾರು ಇದಾಗಿರಲಿದ್ದು, ಸನ್‌ರೂಫ್‌, 360 ಡಿಗ್ರಿ ಕ್ಯಾಮೆರಾ, ಮುಂಭಾಗದ ಆಸನಗಳು ವೆಂಟಿಲೇಟೆಡ್‌, ಡುಯಲ್‌ ಡಿಜಿಟಲ್‌ ಸ್ಕ್ರೀನ್‌, ADAS ಇರಲಿವೆ ಎಂದೆನ್ನಲಾಗಿದೆ.

Mahindra XUV 3Xo EV

3XO EV 4 ಮೀಟರ್ ಒಳಗಿನ ಕಾರು ಆಗಿದ್ದು, Internal Combustion Engine (ICE) ಹೊಂದಿರಲಿದೆ. ಈ ಬಾರಿ XUV 400 ಹಾಗೂ 3XO EVಗಿಂತಲೂ ದೊಡ್ಡ ಕಾರನ್ನು ಮಹೀಂದ್ರಾ ಹೊರತರುತ್ತಿದೆ ಎಂದೆನ್ನಲಾಗಿದೆ. 34.5 ಕಿಲೋ ವ್ಯಾಟ್‌ ಬ್ಯಾಟರಿ ಪ್ಯಾಕ್‌ ಅನ್ನು ಇದು ಹೊಂದಿರಲಿದ್ದು, ಸಿಂಗಲ್ ಚಾರ್ಜ್‌ಗೆ 359 ಕಿ.ಮೀ. ದೂರ ಕ್ರಮಿಸಬಲ್ಲದು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ