ಮುಂಬೈ: ಜರ್ಮನಿಯ ವಿಲಾಸಿ ಕಾರು ತಯಾರಿಕಾ ಕಂಪನಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಪರಿಚಯಿಸಿರುವ ತನ್ನ ಟೈಗನ್ ಎಸ್‌ಯುವಿ ಹಾಗೂ ವರ್ಟಸ್ ಸೆಡಾನ್ ಮಾದರಿಯ ಕಾರುಗಳಲ್ಲಿ ಜಾಗತಿಕ ಎನ್‌ಕ್ಯಾಪ್ 5 ಸ್ಟಾರ್ ಅಡಿಯಲ್ಲಿ ಆರು ಏರ್ ಬ್ಯಾಗ್‌ಗಳನ್ನು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಇಂಡಿಯಾ 2.0 ಪರಿಚಯಿಸುವ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿನ ಫೋಕ್ಸ್‌ವ್ಯಾಗನ್ ಕಾರು ಪ್ರಿಯರ ಬೇಡಿಕೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದೂ ಕಂಪನಿ ಹೇಳಿದೆ ಎಂದು ವರದಿಯಾಗಿದೆ.
‘2021ರ ಸೆಪ್ಟೆಂಬರ್‌ನಲ್ಲಿ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಓವರ್ ಎಸ್‌ಯುವಿ ಟೈಗನ್ ಕಾರು ಭಾರತದಲ್ಲಿ ಪರಿಚಯಗೊಂಡಿತು. 2022ರ ಮಾರ್ಚ್‌ನಲ್ಲಿ ಥೀಮ್ ಗಾತ್ರದ ಸೆಡಾನ್ ವರ್ಟಸ್ ಭಾರತದಲ್ಲಿ ಪರಿಚಯಗೊಂಡಿತು. ಈ ಎರಡೂ ಮಾದರಿಯ ಎಲ್ಲಾ ವೇರಿಯಂಟ್‌ಗಳಲ್ಲೂ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗೆ ಕಂಪನಿ ಗರಿಷ್ಠ ಗಮನ ನೀಡಿದೆ’ ಎಂದು ಕಂಪನಿಯ ಬ್ರಾಂಡ್ ಡೈರೆಕ್ಟರ್ ಆಶೀಶ್ ಗುಪ್ತಾ ತಿಳಿಸಿದ್ದಾರೆ.
‘ಟೈಗನ್ ಮತ್ತು ವರ್ಟಸ್ ಮಾದರಿಯ ಒಂದು ಲಕ್ಷ ಕಾರುಗಳ ಮಾರಾಟ ಗುರಿಯನ್ನು ಕಂಪನಿ ತಲುಪಿರುವುದು ಒಂದು ಸಂಭ್ರಮವೇ ಸರಿ’ ಎಂದಿದ್ದಾರೆ.
ಫೋಕ್ಸ್‌ವ್ಯಾಗನ್ ಇಂಡಿಯಾ ಇತ್ತೀಚೆಗೆ ಎರಡು ಹೊಸ ವೇರಿಯಂಟ್‌ಗಳನ್ನು ಪರಿಚಯಿಸಿದೆ. ಇದರಲ್ಲಿ 1 ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಟೈಗನ್ ಜಿಟಿ ಲೈನ್ ಹಾಗೂ 1.5ಲೀ ಟರ್ಬೊ ಪೆಟ್ರೋಲ್ ಆಯ್ಕೆಯ ಜಿಟಿ ಪ್ಲಸ್ ಸ್ಪೋರ್ಟ್.