ದೂರದ ಊರುಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ‘ವೊಲ್ವೊ 9600’ ಮಲ್ಟಿ ಆ‍್ಯಕ್ಸೆಲ್’ಸೀಟರ್ ಪ್ರೋಟೊ ಟೈಪ್ (ಮೂಲ ಮಾದರಿ) 20 ಹೊಸ ಬಸ್‌ಗಳು ಇನ್ನು ಮೂರು ತಿಂಗಳಲ್ಲಿ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಲಿವೆ.
ಮಂಗಳೂರು, ಕುಂದಾಪುರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಮುಂಬೈ, ಶಿರಡಿ, ಚೆನ್ನೈ, ಎರ್ನಾಕುಲಂ ಸೇರಿದಂತೆ ಹೊರರಾಜ್ಯಗಳ ಪ್ರದೇಶಗಳಿಗೆ ಈ ಬಸ್‌ಗಳು ಸಂಚರಿಸಲಿವೆ.
ಬಸ್ ವಿಶೇಷ: ಶಕ್ತಿಶಾಲಿ ಹ್ಯಾಲೊಜಿನ್ ಹೆಡ್‌ಲೈಟ್ ಮತ್ತು ಡೇ ರನ್ನಿಂಗ್ ಲೈಟ್ (ಡಿಆರ್‌ಎಲ್), ಐಷರಾಮಿ ಒಳ ವಿನ್ಯಾಸ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್ ಹೊಂದಿದೆ.
ಉತ್ತಮ ಇಂಧನ ದಕ್ಷತೆ, ನವೀನ ತಂತ್ರಜ್ಞಾನದಿಂದ ಸುಧಾರಿತ ಎಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಎಂಜಿನ್ ಹೆಚ್ಚು ಮೈಲೇಜ್ ನೀಡುತ್ತದೆ. ಬಸ್ಸಿನ ಉದ್ದದಲ್ಲಿ ಶೇ 3.5ರಷ್ಟು ಹೆಚ್ಚಳ ಇರುವುದರಿಂದ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ಬಸ್ಸಿನ ಎತ್ತರದಲ್ಲಿ ಶೇ 5.6ರಷ್ಟು ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್ ರೂಂ ಹೊಂದಿದೆ. ಕಿಟಕಿ ಗಾಜು ಶೇ 9.5ರಷ್ಟು ವಿಸ್ತಾರವಾಗಿದೆ. ಲಗೇಜ್‌ಗೆ ವಿಶಾಲ ಸ್ಥಳಾವಕಾಶವಿದೆ.
‘ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಇದೆ. ಉನ್ನತ ದರ್ಜೆಯ, ಉತ್ತಮ ವಿನ್ಯಾಸದ ಆಸನಗಳಿವೆ. ಸುರಕ್ಷತೆಗಾಗಿ ಹಿಂಭಾಗದಲ್ಲಿ ಫಾಗ್‌ಲೈಟ್ ಮತ್ತು ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್‌ಎಪಿಎಸ್) ಅಳವಡಿಸಲಾಗಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.